ಡಾ. ತಳವಾರ ಸಾಬಣ್ಣಾ, ವಿಧಾನ ಪರಿಷತ ಸದ್ಯಸರು, ಕರ್ನಾಟಕ ಸರಕಾರ, ಬೆಂಗಳೂರು.
ಅಧಿಸೂಚನೆ : 22-7-2020
ಪ್ರಮಾಣ ವಚನ : 30-7-2020
ಶಿಕ್ಷಣ ಕ್ಷೇತ್ರ
ಸಂಘದ ಚಟುವಟಿಕೆಗಳು
ಸಮಾಜ/ ಸಮಾಜಗಳ ಚಟುವಟಿಕೆಗಳು (ಸಾಮರಸ್ಯ)
ಸಂಕ್ಷಿಪ್ತ ಪರಿಚಯ
ಡಾ. ತಳವಾರ ಸಾಬಣ್ಣಾ, ವಿಧಾನ ಪರಿಷತ್ತಿನ ಸದಸ್ಯರು, ಕರ್ನಾಟಕ ಸರಕಾರ, ಬೆಂಗಳೂರು.
ಇವರು ಮೂಲತಃ ಕಲಬುರಗಿ ಜಿಲ್ಲೆಯ ಶಹಬಾದ ತಾಲೂಕಿನ ಭಂಕೂರು ಗ್ರಾಮದವರು. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಭಂಕೂರು ಗ್ರಾಮದಲ್ಲಿ ಮಾಡಿದರು.
ಪ್ರಸ್ತುತ ಬೆಳಗಾವಿ ಜಿಲ್ಲೆಯ ಬೆಳಗಾವಿ ನಗರದ ವೈಭವ ನಗರದಲ್ಲಿ ವಾಸಿಸುತ್ತಿದ್ದಾರೆ.
1988 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಸ್ವರ್ಣ ಪದಕ ಪಡೆದುಕೊಂಡರು.
ಕಲಬುರಗಿ ಜಿಲ್ಲೆಯ ಮುಧೋಳದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ 3 ವರ್ಷ ಸೇವೆ ಸಲ್ಲಿಸಿ, 1 ವರ್ಷ ಚಿತ್ತಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾಗಿ, ನಂತರ 1997 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬೆಳಗಾವಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟು 33 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಉಪ ಕುಲಸಚಿವರಾಗಿ, ಕುಲಸಚಿವರ ಕಛೇರಿಯ ವಿಶೇಷಾಧಿಕಾರಿಯಾಗಿ,
ಸಿಂಡಿಕೇಟ್ ಸದಸ್ಯರಾಗಿ, ಪಿ.ಜಿ. ವಿಭಾಗಗಳ ನಿರ್ದೇಶಕರಾಗಿ, ವಿವಿಧ ಕಮಿಟಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಶಿಕ್ಷಣ ಕ್ಷೇತ್ರದಲ್ಲಿ ಡಾ. ತಳವಾರ ಸಾಬಣ್ಣಾ ಅವರ ಸಾಧನೆಯನ್ನು ಗಮನಿಸಿ ಘನ ರಾಜ್ಯ ಸರ್ಕಾರದ ಗೌರವಾನ್ವಿತ ರಾಜ್ಯಪಾಲರು ಇವರನ್ನು ಶಿಕ್ಷಣ ಕ್ಷೇತ್ರದಿಂದ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುತ್ತಾರೆ.